ಬಿಜೆಪಿಯಿರಲಿ, ಕಾಂಗ್ರೆಸ್ ಇರಲಿ ಅಥವಾ ಇನ್ನೊಂದು ಪಕ್ಷವಿರಲಿ, ರಾಜಕೀಯದಲ್ಲಿ ಗೆಲ್ಲುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ರಾಜ್ಯ ರಾಜಕಾರಣಿಗಳ ಪೈಕಿ 'ಸೈನಿಕ' ಸಿ ಪಿ ಯೋಗೇಶ್ವರ್ ಕೂಡಾ ಒಬ್ಬರು. 1999 ರಿಂದ 2013ರ ವರೆಗೆ ನಡೆದ (ಉಪಚುನಾವಣೆಯೂ ಸೇರಿ) ಆರು ಇಲೆಕ್ಷನ್ ನಲ್ಲಿ ಯೋಗೇಶ್ವರ್ ಐದು ಬಾರಿ ಗೆದ್ದಿದ್ದಾರೆ. ಇದಕ್ಕಾಗಿ ಇವರು ಆಯ್ಕೆ ಮಾಡಿಕೊಂಡ ಪಾರ್ಟಿ ಕಾಂಗ್ರೆಸ್, ಬಿಜೆಪಿ, ಎಸ್ಪಿ ಮತ್ತು ಒಮ್ಮೆ ಪಕ್ಷೇತರರಾಗಿ ಕಣಕ್ಕಿಳಿದು ಅಲ್ಲೂ ಪ್ರಾಭ್ಯಲ್ಯ ಮೆರೆದಿದ್ದರು.